ಶುಕ್ರವಾರದಂದು 30 ಚಿತ್ರಮಂದಿರದಲ್ಲಿ ಮುಮ್ತಾಜ್
Posted date: 22 Thu, Oct 2015 – 08:26:04 AM

ಹಿರಿಯ ನಿರ್ದೇಶಕ ದಿನೇಶ್‌ಬಾಬು ಬಳಿ ಸಹಾಯಕರಾಗಿ ದುಡಿದ ಅನುಭವವಿರುವ ರಾಘವಮುರಳಿ ಸ್ವತಂತ್ರವಾಗಿ ಮುಮ್ತಾಜ್ ಚಿತ್ರಕ್ಕೆ  ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಶೀರ್ಷಿಕೆ ಹೇಳುವಂತೆ ಸುಂದರ ಪ್ರೇಮಕತೆಗೆ ಯುವ ಜೋಡಿಗಳು ಬೇಕಾಧ ಕಾರಣ ನವಗ್ರಹದಲ್ಲಿ ಕಾಣಿಸಿಕೊಂಡಿದ್ದ ಧರ್ಮ ಮತ್ತು ಶರ್ಮಿಳಾಮಾಂಡ್ರೆಯನ್ನು  ಆಯ್ಕೆ ಮಾಡಿಕೊಂಡಿದ್ದಾರೆ. ಒಂದು ಹಾಡನ್ನು ಕೆ.ಜಿ.ಎಫ್ ಮತ್ತು ಐದು ಹಾಡುಗಳನ್ನು ಸೆಟ್ ಹಾಕಿ ಚಿತ್ರೀಕರಿಸಿರುವುದು ವಿಶೇಷ. ಪ್ರೇಮಿಗಳಿಗೆ ಪ್ರೋತ್ಸಾಹ ನೀಡುವ ಗೌರವ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಫೈಟ್ ಮಾಡಲು ಲಾಂಗ್ ಹಿಡಿಯುತ್ತಿದ್ದೆ. ಈಗ ಪ್ರೇಮಿಗಳಿಗೋಸ್ಕರ ಲಾಂಗ್ ಕೈಗೆ ತೆಗೆದುಕೊಂಡಿದ್ದೇನೆ ಅಂತ ಜಬರ್ ದಸ್ತ್ ಡೈಲಾಗ್ ಹೇಳಿಕೊಂಡು, ನಾಯಕನನ್ನು ಕ್ಯಾಡ್‌ಬರೀಸ್ ಅಂತ ಕರೆಯುತ್ತಾ ಪರದೆ ಮೇಲೆ ಕಾಣಿಸಿಕೊಳ್ಮ್ಳತ್ತಾರಂತೆ.
ಸಾಮಾನ್ಯವಾಗಿ ಪ್ರೀತಿ ಕತೆಯಲ್ಲಿ ಖಳನಾಯಕ ಇರುತ್ತಾನೆ. ಮುಮ್ತಾಜ್‌ನಲ್ಲಿ  ವಿಲನ್ ಪ್ರೀತಿ ರೂಪದಲ್ಲಿ ಬರುತ್ತದೆ. ಮೂರು ವರ್ಷಗಳ ನಂತರ ಧರ್ಮ ನಾಯಕನಾದರೆ, ಗ್ಯಾಪ್‌ನಲ್ಲಿ ಬಿಡುವು ಮಾಡಿಕೊಂಡು ಶರ್ಮಿಳಾಮಾಂಡ್ರೆ ನಾಯಕಿಯಾಗಿ ನಟಿಸಿದ್ದಾರೆ. ವಾಣಿಜ್ಯ ಮಂಡಳಿ ಪದಾದಿಕಾರಿ ಉಮೇಶ್‌ಬಣಕಾರ್ ಲೆಕ್ಚರರ್ ಪಾತ್ರದಲ್ಲಿ ನಾಯಕನಿಗೆ ಪ್ರೀತಿ ಬಗ್ಗೆ ಹಿತವಚನ ಹೇಳುತ್ತಾರೆ. ಪ್ರವೀಣ್ ಸಂಗೀತ ನಿರ್ದೇಶಕ, ಸಹೋದರ ಪ್ರದೀಪ್ ಸಾಹಿತಿಯಾಗಿ ಮೊದಲ ಅವಕಾಶ.  ನರಸಿಂಹಮೂರ್ತಿ ನಿರ್ಮಾಪಕ ಮತ್ತು ಸದಾಶಿವ್ ಸಹನಿರ್ಮಾಪಕರಾಗಿ ಎರಡೂವರೆ ಕೋಟಿ ಖರ್ಚು ಮಾಢಿದ್ದಾರೆ. ಯುಟ್ಯೂಬ್‌ನಲ್ಲಿ ಒಂದು ಕಾಲು ಲಕ್ಷಕ್ಕೂ ಹೆಚ್ಚು ಜನರು ಟ್ರೈಲರ್ ನೋಡಿರುವ ಚಿತ್ರವು ಶುಕ್ರವಾರದಂದು ೧೫೦ ಕೇಂದ್ರಗಳಲ್ಲಿ ತೆರೆಗೆ ಬರಲಿದೆ.

GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed